ನಾಮದ ಚಿಲುಮೆ / Nāmada Cilume

ದೇವರಾಯನ ದುರ್ಗದ ಬೆಟ್ಟದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಬಂದು ಕೆಲಕಾಲ ವನವಾಸ ಅನುಭವಿಸಿದರು ಎಂದು ಕಥೆಯಿದೆ. ಒಂದು ದಿನ ಬೆಳಗ್ಗೆ ರಾಮ ಬಂಡೆಯ ಮೇಲೆ ಕುಳಿತಿದ್ದ. ಹಣೆಗೆ ನಾಮವಿಡಬೇಕಾಗಿ ಬಂದಿತು. ಸುತ್ತಲೂ ನೋಡಿದ, ನೀರು ಕಾಣಲಿಲ್ಲ. ಆಗ ಬಾಣ ಹೂಡಿ, ಬಂಡೆಯ ಮೇಲೆ ಪ್ರಯೋಗಿಸಿದ. ಅದು ಬಂಡೆಯ ಒಳಹೊಕ್ಕಿತು, ನೀರಿನ ಬುಗ್ಗೆ ಚಿಮ್ಮಿತು. ಆದ್ದರಿಂದ ಈ ಸ್ಥಳ ನಾಮದ ಚಿಲುಮೆ ಎಂದೇ ಪ್ರಖ್ಯಾತವಾಗಿದೆ.